ಪಾಣಾಜೆ ಸುಬೋಧ ಪ್ರೌಢಶಾಲಾ ಪ್ರಾರಂಭೋತ್ಸವ


ಪಾಣಾಜೆ: ಜೂನ್ 2025-2026 ನೇ ಶೈಕ್ಷಣಿಕ ಸಾಲಿನ ಪಾಣಾಜೆ ಸುಬೋಧ ಪ್ರೌಢಶಾಲೆಯ  ಪ್ರಾರಂಭೋತ್ಸವವು ಜೂನ್ 2ರಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರಿಗಿತು. ಅಧ್ಯಕ್ಷರು ತನ್ನ ಭಾಷಣದಲ್ಲಿ ಶಿಕ್ಷಣದ ಪ್ರಾಮುಖ್ಯತೆ, ವಿದ್ಯಾರ್ಥಿಗಳ ಜವಾಬ್ದಾರಿ, ಶಿಸ್ತಿನ ಶಿಕ್ಷಣ ಯಶಸ್ಸಿಗೆ ಕಾರಣ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಿದರು.


      ಪ್ರಾರಂಭದಲ್ಲಿ ಸಂಚಾಲಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ  ಹಾಜಿ ಎಸ್ ಅಬೂಬಕ್ಕರ್ ಇವರು ಜಂಟಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶಾಲೆಯಲ್ಲಿ ಮಕ್ಕಳ ಕರ್ತವ್ಯಗಳನ್ನು ವಿವರಿಸಿ ಶುಭವನ್ನು ಹಾರೈಸಿದರು.


 ಇದೇ ಸಂದರ್ಭದಲ್ಲಿ ಬೆಂಗಳೂರಿನ ವಾನಿಟಾ ಕಂಪೆನಿಯಲ್ಲಿ ಇಂಜಿನಿಯರಿಂಗ್ ಮೆನೇಜರ್ ಆಗಿರುವ ಶ್ರೀನಿಧಿ ನಿಡುಗಳ ಅವರ ಸಂಸ್ಥೆಯಿಂದ ನೀಡಿದ ಶೈಕ್ಷಣಿಕ ಕಿಟ್ಟನ್ನು ಹಾಗೂ ಇಲಾಖೆ ನೀಡಿದ ಪಠ್ಯಪುಸ್ತಕಗಳನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಚಾಲಕರು ಕೊಡಮಾಡಿದ  ಪೆನ್ನುಗಳನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿತರಿಸಲಾಯಿತು.


      10ನೇ ತರಗತಿ ವಿದ್ಯಾರ್ಥಿನಿ ಸಿಂಚನ ಎಸ್ ಪ್ರಾರ್ಥಿಸಿ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಕೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುದೀರ್ ಎಸ್ ಪಿ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿ  ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಯವರು ಹಾಜರಿದ್ದು ಸಹಕರಿಸಿದರು.
Next Post Previous Post

Ad 1
Ad 2
Ad 3

Advertisement

Advertisement

Advertisement