131 ದಿನಗಳ ಬಳಿಕ ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಹೊರ ಬಂದ 'ನಟ ದರ್ಶನ್' ರಿಲೀಸ್: | Actor Darshan released


ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲುಪಾಲಾಗಿದ್ದಂತ ನಟ ದರ್ಶನ್ ಗೆ ( Actor Darshan ) 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರು ಬಳ್ಳಾರಿ ಜೈಲಿನಿಂದ 131 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ.

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿದ್ದರು. ಅವರಿಗೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಇಲ್ಲದಿದ್ದರೇ ಪ್ರಾಣಾಪಾಯವಿದೆ ಎಂಬುದಾಗಿ ಹೈಕೋರ್ಟ್ ಗೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ್ದಂತ ಹೈಕೋರ್ಟ್ ನ್ಯಾಯಪೀಠವು ನಟ ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತ ಜಾಮೀನು ಮಂಜೂರು ಮಾಡಿತ್ತು.

ಹೈಕೋರ್ಟ್ ನೀಡಿದ್ದಂತ ಜಾಮೀನಿನ ಹಿನ್ನಲೆಯಲ್ಲಿ ನಟ ದರ್ಶ್ ಅವರು ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಹೊರ ಬಂದು, ಅಲ್ಲಿಂದ ಜೈಲಿನ ಬಿಡುಗಡೆಯ ಎಲ್ಲಾ ನಿಯಮಗಳನ್ನು ಪಾಲಿಸಿ, ಸಹಿ ಹಾಕಿದ ನಂತ್ರ, ಬಳ್ಳಾರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹಲವು ತಿಂಗಳುಗಳ ಕಾಲ ಜೈಲುಪಾಲಾಗಿದ್ದಂತ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾದಂತೆ ಆಗಿದೆ.

ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್ ಅವರು ಬೆಂಗಳೂರಿಗೆ ರಸ್ತೆ ಮೂಲಕ ಬರಲಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ವೈದ್ಯರ ಸಲಹೆಯಂತೆ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

Next Post Previous Post

Announcement