BREAKING NEWS: ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ಏಳು ಮಂದಿ ಪೊಲೀಸ್ ವಶಕ್ಕೆ.?!
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ಏಳು ಮಂದಿ ಪೊಲೀಸ್ ವಶಕ್ಕೆ!
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ವಿವರ ಹಾಗೂ ಅಧಿಕೃತ ಪ್ರಕಟಣೆ ಪೊಲೀಸ್ ಇಲಾಖೆಯಿಂದ ಇನ್ನಷ್ಟೇ ಬರಬೇಕಿದೆ.
ರೌಡಿ ಶೀಟರ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ರವರ ಹತ್ಯೆಗೆ ಸ್ವಧರ್ಮಿಯರೇ ಸ್ಕೆಚ್ ಹಾಕಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದು ಕೆಲವು ಕ್ಷಣಗಳಲ್ಲಿ ಕಮಿಷನರ್ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ.
ಫಾಝಿಲ್ ಹತ್ಯೆಗೆ ಪ್ರತೀಕಾರ ಈ ಹತ್ಯೆ ನಡೆದಿದೆ ಎಂದು ಕೆಲವು ಹಿಂದೂ ಪರಿಷತ್ ನಾಯಕರು ಮತ್ತು ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿದ್ದರು, ಜೊತೆಗೆ ಇಂದು ಎರಡು ಕಡೆ ರಿವೆಂಜ್ ಅಟ್ಯಾಕ್ ನಡೆದಿದ್ದು ಇವೆಲ್ಲದಕ್ಕೂ ಇತೀಶ್ರೀ ನೀಡುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದ್ದು ಇದು ಒಂದು ಗ್ಯಾಂಗ್ ವಾರ್ ಅಥವಾ ವ್ಯಯಕ್ತಿಕ ಕಾರಣದಿಂದ ಈ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು ನಿಖರವಾದ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಎಲ್ಲವನ್ನೂ ಇಂಚಿಂಚಾಗಿ ಕಮಿಷನರ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜನತೆಗೆ ಸತ್ಯ ಏನೆಂದು ತಿಳಿಸಳಿದ್ದಾರೆ ಈ ಮೂಲಕ ಸುಹಾಸ್ ಶೆಟ್ಟಿಯ ಸಾವಿನ ಹಿಂದಿನ ಸತ್ಯಾಸತ್ಯ ಹೊರ ಬೀಳಲಿದೆ.