ಕೊಡಗಿನಲ್ಲಿ ನಡೆದ SSF ಕರ್ನಾಟಕ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಉರ್ದು ನಅತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಒಕ್ಕೆತ್ತೂರು ಶಾಖೆಯ ಪ್ರತಿಭೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಪುತ್ತೂರು: ಕೊಡಗು ಜಿಲ್ಲೆಯ ಕೊಡೆಂಗೇರಿಯಲ್ಲಿ ನವಂಬರ್ 16 & 17 ರಂದು ನಡೆದ SSF ಕರ್ನಾಟಕ ರಾಜ್ಯ ಮಟ್ಟದ ಸಾಹಿತ್ಯೋತ್ಸವ - 2024 ದಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯನ್ನು ಪ್ರತಿನಿಧಿಸಿ ಒಕ್ಕೆತ್ತೂರು ಶಾಖೆಯ ಪ್ರತಿಭೆಗಳಾದ ಆಶ್ರಕ್ ರುಮೈಝ್, ಮುಹಮ್ಮದ್ ಆಶ್ಫಲ್, ಮುಹಮ್ಮದ್ ಇಹ್ಸಾನ್, ಇವರು ಜೂನಿಯರ್ ವಿಭಾಗದ ಉರ್ದು ನಅತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಮುಂದೆ ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ
SSF ಒಕ್ಕೆತ್ತೂರು ಶಾಖಾ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.