ಪಾಣಾಜೆ ಸುಬೋಧ ಪ್ರೌಢ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ
ಪುತ್ತೂರು: ಮೇ 2, 2024-2025ನೇ ಸಾಲಿನ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಗೆ 100% ಫಲಿತಾಂಶ ಬಂದಿರುತ್ತದೆ. ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಲ್ಲಿ ತೇರ್ಗಡೆಯಾಗಿರುತ್ತಾರೆ.18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಐದು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿರುತ್ತಾರೆ.
ಗುಡ್ಡೆ ಮನೆಯ ಈಶ್ವರ ನಾಯ್ಕ ಹಾಗೂ ಆನಂದಿ ಅವರ ಮಗಳು ಸುಶ್ಮಿತಾ 609 ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.ಪಿದಾರದ ರಾಧಾಕೃಷ್ಣ ಹಾಗೂ ನಳಿನಿ ಅವರ ಪುತ್ರಿ ತೃಪ್ತಿ 601 ಅಂಕಗಳನ್ನು ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. ಬೊಳ್ಳಿಂಬಳದ ಅಬ್ದುಲ್ ರಜಾಕ್ ಹಾಗೂ ಅಬೀದಾ ಅವರ ಪುತ್ರಿ ನೆಫೀಸತ್ ಮಶ್ ರೂಫ 593 ಅಂಕಗಳನ್ನು ಪಡೆದು ಶಾಲೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಗುವೆಲ್ ಗದ್ದೆಯ ದೇವಪ್ಪ ಮೂಲ್ಯ ಹಾಗೂ ಶಶಿಕಲಾ ಅವರ ಪುತ್ರಿ ರಚನಾ ಡಿ ಎಸ್ 567 ಅಂಕಗಳು, ದೇವಸ್ಯದ ಶ್ರೀಧರ, ಸರೋಜಿನಿ ದಂಪತಿ ಪುತ್ರಿ ಪ್ರೀತಿಕಾ 552 ಅಂಕಗಳು, ಪಾಲ್ತಮೂಲೆಯ ಶಶಿಧರ ಹಾಗೂ ಮಾಲತಿ ಅವರ ಪುತ್ರಿ ಅನಘಶಂಕರಿ 548 ಅಂಕಗಳು ಹಾಗೂ ಭರಣ್ಯದ ಕೊರಗಪ್ಪ ಗೀತಾ ದಂಪತಿ ಪುತ್ರಿ ತನ್ವಿ 533 ಅಂಕಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿರುತ್ತಾರೆ.
ಸತತವಾಗಿ ಮೂರನೇ ಬಾರಿಗೆ 100% ಫಲಿತಾಂಶ ಬಂದಿರೋದು ಬಹಳ ಸಂತೋಷವನ್ನುಂಟು ಮಾಡಿದೆ ಗಡಿನಾಡ ಪ್ರದೇಶದಲ್ಲಿ ಅತ್ಯುನ್ನತ ವಿದ್ಯಾಭ್ಯಾಸವನ್ನು ನೀಡುತ್ತಿರುವ ಸುಬೋಧ ಪ್ರೌಢಶಾಲೆ ಪಾಣಾಜೆ ಯಶಸ್ವಿಯತ್ತ ಸಾಗುತ್ತಿದೆ 100% ಫಲಿತಾಂಶದೊಂದಿಗೆ ಶಾಲೆಗೆ ಮತ್ತು ನಾಡಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಅದಕ್ಕೆ ಬೇಕಾಗಿ ಪ್ರೋತ್ಸಾಹಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ , ಪೋಷಕರಿಗೆ ಹಾಗೂ ಆಡಳಿತ ಮಂಡಳಿಗೆ ಹೃತ್ಪೂರ್ವಕವಾದ ಅಭಿನಂದನೆ ಸಲ್ಲಿಸುತ್ತೇನೆ.
ಡಾ.ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು
ಅಧ್ಯಕ್ಷರು ಶಾಲಾ ಶಿಕ್ಷಕ-ರಕ್ಷಕ ಸಂಘ
ಸುಬೋಧ ಪ್ರೌಢಶಾಲೆ ಪಾಣಾಜೆ