ಯೋಗದಲ್ಲಿ ಅತೀ ಹೆಚ್ಚು ದಾಖಲೆ ಮಾಡಿ ಭಾರತ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಗೌರಿತಾ

ಮಂಗಳೂರು: ಒಂದು ಗಂಟೆ 10 ನಿಮಿಷ ಪದ್ಮಾಸನದಲ್ಲಿ ಇರುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ಒಂದು ಗಂಟೆ 10 ನಿಮಿಷ 32 ಸೆಕೆಂಡುಗಳ ಕಾಲ ಪದ್ಮಾಸನದಲ್ಲಿ ಇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 45 ನಿಮಿಷ 15 ಸೆಕೆಂಡು ಬದ್ಧಕೋನಾಸನದಲ್ಲಿ ಇರುವ ಮೂಲಕ ಕಲಾಂಸ್  ವರ್ಲ್ಡ್ ರೆಕಾರ್ಡ್ಸ್, 54 ನಿಮಿಷ 38 ಸೆಕೆಂಡು ಸೂಪ್ತವೀರಾಸನದಲ್ಲಿ ಇರುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್,


 ಕೊಡಪಾನದ ಮೇಲೆ 11 ನಿಮಿಷ 42 ಸೆಕೆಂಡುಗಳ ಕಾಲ ಪರ್ವತಾಸನ ಮಾಡುವ ಮೂಲಕ  ಎಕ್ಸ್ ಕ್ಲೂಸಿವ್ ಬುಕ್ ಆಫ್ ರೆಕಾರ್ಡ್ಸ್, ಉರಿಯುತ್ತಿರುವ ದೀಪವನ್ನು ಹಣೆಯಲ್ಲಿಟ್ಟು ಸ್ಟೂಲ್ ನ ಮೇಲೆ 6 ನಿಮಿಷ 23 ಸೆಕೆಂಡುಗಳ ಕಾಲ ಭುಜಂಗಾಸನ ಮಾಡುವ ಮೂಲಕ ಕಿಂಗ್ಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್,  ಒಂದು ನಿಮಿಷದಲ್ಲಿ ಕೊಡಪಾನದ ಮೇಲೆ ಅತಿ ಹೆಚ್ಚು ಆಸನಗಳನ್ನು ಮಾಡುವ ಮೂಲಕ ನೊಬೆಲ್ ಬುಕ್ ಆಫ್ ರೆಕಾರ್ಡ್ಸ್ ,

ಒಂದು ನಿಮಿಷದಲ್ಲಿ 30 ಬಾರಿ ಚಕ್ರಾಸನ ಮಾಡುವ ಮೂಲಕ ಎಲೈಟ್  ಬುಕ್ ಆಫ್ ರೆಕಾರ್ಡ್ಸ್, ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಶಶಾಂಗಾಸನದಿಂದ ಭುಜಂಗಾಸನಕ್ಕೆ ಪರಿವರ್ತಿಸುವ ಮೂಲಕ ಇಂಡಿಯಾಸ್ ವರ್ಲ್ಡ್ ರೆಕಾರ್ಡ್, ಒಂದು ನಿಮಿಷದಲ್ಲಿ 20 ಬಾರಿ ರಾಜಕುಪಟಸನದಿಂದ ವಾಲ್ಮೀಕಿ ಆಸನಿಗೆ ಪರಿವರ್ತಿಸುವ ಮೂಲಕ ಚೋಲನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್,

 ಒಂದು ನಿಮಿಷದಲ್ಲಿ 30 ಬಾರಿ ಬುಜಂಗಾಸನದಿಂದ ಪರ್ವತಾಸನಕ್ಕೆ ಪರಿವರ್ತಿಸುವ ಮೂಲಕ ಓ ಎಂ ಜಿ ನ್ಯಾಷನಲ್ ರೆಕಾರ್ಡ್ಸ್, ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ದಂಡಾಸನದಿಂದ ಪರ್ವತಾಸನಕ್ಕೆ ಮಾಡುವ ಮೂಲಕ ಇಂಟರ್ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ಸ್, ಒಂದು ನಿಮಿಷದಲ್ಲಿ ಅತಿ ಹೆಚ್ಚು ಆಸನಗಳನ್ನು ಸ್ಟೂಲ್ ಮೇಲೆ ಮಾಡುವ ಮೂಲಕ ನೋವಾ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. 


ಯೋಗದಲ್ಲಿ ಒಟ್ಟು  ಮೂರು ರಾಷ್ಟ್ರೀಯ ದಾಖಲೆ ಹಾಗೂ 11 ವಿಶ್ವ ದಾಖಲೆಯನ್ನು ಮಾಡಿರುತ್ತಾಳೆ. ಈ ದಾಖಲೆಯನ್ನು ಗುರುತಿಸಿ ಭಾರತ್ ಬುಕ್ ಆಫ್ ರೆಕಾರ್ಡ್ಸ್ ಯೋಗದಲ್ಲಿ ಅತಿ ಹೆಚ್ಚು ದಾಖಲೆ ಮಾಡಿದ ಕಿರಿಯ ಬಾಲಕಿ ಎಂದು ಪರಿಗಣಿಸಿದೆ. ಡಾ. ಗೌತಮ್ ಕೆ ವಿ ಹಾಗೂ ಡಾ. ರಾಜೇಶ್ವರಿ ಎಂ. ಎಂ. ರವರ ಪುತ್ರಿಯಾಗಿರುವ ಗೌರಿತಾ ಪ್ರಸ್ತುತ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಮರ ಯೋಗ ಕೇಂದ್ರ ಗುತ್ತಿಗಾರಿವನಲ್ಲಿ ಯೋಗ ಅಭ್ಯಾಸ ಮಾಡುತ್ತಿರುವ ಈಕೆ ಶರತ್ ಮರ್ಗಿಲಡ್ಕರವರ ಶಿಷ್ಯೆ.
Next Post Previous Post

Announcement