BREAKING ಸ್ಪೀಕರ್ ಪೀಠಕ್ಕೆ ಅಗೌರವ: ವಿಧಾನಸಭೆ ಕಲಾಪದಿಂದ 6 ತಿಂಗಳವರೆಗೆ 18 ಬಿಜೆಪಿ ಸದಸ್ಯರ ಅಮಾನತು


ಬೆಂಗಳೂರು: ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ಬಿಜೆಪಿ ಸದಸ್ಯರು (BJP) ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇಕಡಾ 4 ಮೀಸಲಾತಿ ನೀಡುವ ವಿಧೇಯಕ ಮಂಡನೆ ಸಂದರ್ಭದಲ್ಲಿ ಭಾರೀ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸ್ಪೀಕರ್‌ ಯುಟಿ ಖಾದರ್‌ (U T Khadar) ಅವರಿದ್ದ ಪೀಠವನ್ನೇರಿ ಅವರ ಮೇಲೆ ಬಜೆಟ್‌ ಪ್ರತಿ ಹರಿದು ಕಾಗದ ತೂರಿ ಪ್ರತಿಭಟನೆ (Protest) ಮಾಡಿದ್ದಾರೆ.




ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್ ಪೀಠಕ್ಕೆ ಅಗೌರವ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಧಿವೇಶನದಿಂದ ಅಮಾನತು ಮಾಡಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

ಅಮಾತ್ತುಗೊಂಡ ಶಾಸಕರು!

ಈ ಕ್ಷಣದಿಂದ ಜಾರಿಯಾಗುವಂತೆ, ಬರೋಬ್ಬರಿ 6 ತಿಂಗಳುಗಳ ಕಾಲ ಬಿಜೆಪಿಯ 18 ಮಂದಿ ಶಾಸಕರು ಅಮಾನತ್ತು ಮಾಡಲಾಗಿದೆ. 1- ದೊಡ್ಡಣ್ಣ ಗೌಡ ಪಾಟೀಲ್, 2- ಸಿ ಕೆ ರಾಮಮೂರ್ತಿ, 3- ಅಶ್ವತ್ಥ ನಾರಾಯಣ, 4- ಎಸ್ ಆರ್ ವಿಶ್ವನಾಥ್, 5 - ಬೈರತಿ ಬಸವರಾಜ, 6- ಎಂ ಆರ್ ಪಾಟೀಲ್, 7- ಚನ್ನಬಸಪ್ಪ, 8- ಬಿ ಸುರೇಶ್ ಗೌಡ, 9- ಉಮನಾಥ್ ಕೋಟ್ಯಾನ್.

ಬಿಜೆಪಿ 18 ಸದಸ್ಯರು ಅಮಾನತ್ತು

ಹಾಗೂ 10- ಶರಣು ಸಲಗಾರ್, 11- ಶೈಲೇಂದ್ರ ಬೆಲ್ದಾಳೆ, 12- ಯಶಪಾಲ್ ಸುವರ್ಣ, 13- ಹರೀಶ್ ಬಿಪಿ, 14- ಡಾ. ಭರತ್ ಶೆಟ್ಟಿ, 15- ಮುನಿರತ್ನ, 16- ಬಸವರಾಜ ಮತ್ತಿಮೋಡ್, 17 -ಧೀರಜ್ ಮುನಿರಾಜು, 18- ಡಾ ಚಂದ್ರು ಲಮಾಣಿ ಅಮಾನತ್ತುಗೊಂಡ ಶಾಸಕರಾಗಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರು, ಸದಸ್ಯರನ್ನು ಅಮಾನತ್ತು ಮಾಡುತ್ತಿದ್ದಂತೆ ಸದನದ ಒಳಗೆ ಹಾಜರಾದ ಮಾರ್ಷಲ್‌ಗಳ ಗುಂಪು ಅಮಾನತ್ತುಗೊಂಡ ಶಾಸಕರನ್ನು ಹೊರಗೆ ಕಳುಹಿಸಲು ಮುಂದಾದರು.

Next Post Previous Post

Announcement