BREAKING: UPSC ಫಲಿತಾಂಶ ಪ್ರಕಟ: ದೇಶದಲ್ಲೇ ಮೊದಲ Rank ಪಡೆದ ಶಕ್ತಿ ದುಬೆ | UPSC CSE Final Result 2024


ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) UPSC ನಾಗರಿಕ ಸೇವಾ ಪರೀಕ್ಷೆ (CSE) 2025 ರ ಅಂತಿಮ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ. ಈ ಫಲಿತಾಂಶದೊಂದಿಗೆ 2024ರ ಯುಪಿಎಸ್‌ಸಿ ಪರೀಕ್ಷೆಯ ಸೈಕಲ್‌ ಅಂತ್ಯವಾಗಿರುವುದನ್ನು ಸೂಚಿಸಿದೆ. ಇದರಲ್ಲಿ ಸೆಪ್ಟೆಂಬರ್ 2024 ರಲ್ಲಿ ಲಿಖಿತ ಪರೀಕ್ಷೆ ಮತ್ತು ಜನವರಿ ಮತ್ತು ಏಪ್ರಿಲ್ 2025 ರ ನಡುವೆ ನಡೆದ ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಗಳು ಸೇರಿವೆ.


ವಾರಣಾಸಿಯ ಶಕ್ತಿ ದುಬೆ ಯುಪಿಎಸ್‌ಸಿ ಸಿಎಸ್‌ಇ 2025 ರಲ್ಲಿ 1 ನೇ ಶ್ರೇಯಾಂಕ ಗಳಿಸಿ ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರಿಯಾಣದ ಹರ್ಷಿತಾ ಗೋಯಲ್ 2 ನೇ ಶ್ರೇಯಾಂಕ ಗಳಿಸಿದ್ದರೆ, ಡೊಂಗ್ರೆ ಅರ್ಚಿತ್ ಪರಾಗ್ 3 ನೇ ಸ್ಥಾನ ಗಳಿಸಿದ್ದಾರೆ. ಹರ್ಷಿತಾ ಗೋಯಲ್ ವಡೋದರಾದಲ್ಲಿ ಹುಟ್ಟಿ ಬೆಳೆದರು ಮತ್ತು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.

ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಕೇಂದ್ರ ಸೇವೆಗಳ ಗ್ರೂಪ್ ಎ ಮತ್ತು ಬಿ ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ ಯುಪಿಎಸ್‌ಸಿ 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಅಂತಿಮ ಆಯ್ಕೆಯ ಸ್ಥಿತಿಯನ್ನು ಅಧಿಕೃತ UPSC ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.

UPSC TOPPER 2025 ರ ಶ್ರೇಯಾಂಕ ಪಟ್ಟಿ: TOPPERS ಯಾರು?

UPSC CSE 2025 ರ ಅಂತಿಮ ಫಲಿತಾಂಶದ ಟಾಪ್ 25 ಅಭ್ಯರ್ಥಿಗಳು ಇಲ್ಲಿವೆ:

ಶ್ರೇಯಾಂಕರೋಲ್ ನಂಬರ್ಹೆಸರು
1240782ಶಕ್ತಿ ದುಬೆ
2101571ಹರ್ಷಿತಾ ಗೋಯಲ್
3867282ಡೊಂಗ್ರೆ ಅರ್ಚಿತ್ ಪರಾಗ್
4108110ಶಾಹ್ ಮಾರ್ಗಿ ಚಿರಾಗ್
5833621ಆಕಾಶ್ ಗಾರ್ಗ್
6818290ಕೋಮಲ್ ಪುನಿಯಾ
7902167ಆಯೂಷಿ ಬನ್ಸಾಲ್
8613295ರಾಜ್ ಕೃಷ್ಣ ಝಾ
9849449ಆದಿತ್ಯ ವಿಕ್ರಮ್ ಅಗರವಾಲ್
10400180ಮಯಂಕ್ ತ್ರಿಪಾಠಿ
11200949ಎಟ್ಟಬೋಯಿನ ಸಾಯಿ ಶಿವಾನಿ
12809367ಆಶಿ ಶರ್ಮಾ
135912548ಹೇಮಂತ್
14818331ಅಭಿಷೇಕ್ ವಶಿಷ್ಠ
151010403ಬಣ್ಣಾ ವೆಂಕಟೇಶ್
16907627ಮಾಧವ್ ಅಗರವಾಲ್
17810414ಸಂಸ್ಕೃತಿ ತ್ರಿವೇದಿ
182604936ಸೌಮ್ಯ ಮಿಶ್ರಾ
19833456ವಿಭೋರ್ ಭರದ್ವಾಜ್
202200688ತ್ರಿಲೋಕ್‌ ಸಿಂಗ್‌
21859649ದಿವ್ಯಾಂಕ್ ಗುಪ್ತಾ
22865358ರಿಯಾ ಸೈನೀ
23865358ಬಿ. ಶಿವಚಂದ್ರನ್
24334811ಆರ್. ರಂಗಮಂಜು
251202909ಗೀ ಗೀ ಎಎಸ್‌
Next Post Previous Post

Announcement