BREAKING NEWS: ಭಾರತ-ಪಾಕ್ ಉದ್ವಿಗ್ನತೆ: IPL- 2025 ರದ್ದುಗೊಳಿಸಿದ BCCI..!!?
ನವದೆಹಲಿ: ಭಾರತ ಹಾಗೂ ಪಾಕ್ ನಡುವೆ ಯುದ್ಧ ಭೀತಿ ಇರುವುದರಿಂದ 2025ನೇ ಸಾಲಿನ ಐಪಿಎಲ್ ನ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಆಗಿದೆ.
ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಅವರ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ನೋವನ್ನು ತಂದಿದೆ.
ಈ ಹಿಂದೆ 2021ರ ಕೋವಿಡ್ ಸಂದರ್ಭದಲ್ಲಿಯೂ ಐಪಿಎಲ್ ಟೂರ್ನಿಯನ್ನ ರದ್ದುಗೊಳಿಸಲಾಗಿತ್ತು.