ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ಯುವಕನ ಮೇಲೆ ತಲವಾರಿನಿಂದ ದಾಳಿ


ಉಳ್ಳಾಲ: ತೊಕ್ಕೊಟ್ಟು ಒಳಪೇಟೆ ಬಳಿ ತಂಡವೊಂದು ಯುವಕನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ವರದಿಯಾಗಿದೆ.


ಗಾಯಗೊಂಡವರನ್ನು ಅಳೇಕಲ ನಿವಾಸಿ ಫೈಝಲ್ ಎಂದು ಗುರುತಿಸಲಾಗಿದೆ.

ದಾಳಿಯಿಂದ ಆತ ಇರಿತವಾದ ರೀತಿಯಲ್ಲಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಫೈಝಲ್ ಅವರು ಕಲ್ಲಾಪು ಮಾರುಕಟ್ಟೆ ಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎನ್ನಲಾಗಿದೆ.
Next Post Previous Post

Announcement