BREAKING NEWS: ವಿಮಾನ ಪತನ; 200ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಶಂಕೆ | ದುರಂತಕ್ಕೀಡಾದ ವಿಮಾನದಲ್ಲಿ ಗುಜರಾತ್ ನ ಮಾಜಿ ಸಿಎಂ ವಿಜಯ್ ರುಪಾನಿ ಕೂಡ ಪ್ರಯಾಣ

ಅಹಮದಾಬಾದ್: ಟೇಕ್ ಆಫ್ ಆದ ಕೂಡಲೇ ಏರ್ ಇಂಡಿಯಾ ವಿಮಾನ ಪತನವಾಗಿರುವ ದುರಂತ ಘಟನೆಯೊಂದು ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.


ಈ ವಿಮಾನ ನಿಲ್ದಾಣದ ಆವರಣದಿಂದ ದಟ್ಟ ಹೊಗೆ ಹೊರಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಂದು ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ.


Read More: ಅಹಮದಾಬಾದ್ ವಿಮಾನ ದುರಂತ: ವಿಮಾನ ಪಥನಗಳುತ್ತಿರುವ ವಿಡಿಯೋ ವೈರಲ್ Click Here 

ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ದಟ್ಟ ಹೊಗೆಯ ಮೋಡ ಆವರಿಸುತ್ತಿರುವುದು ಕಂಡು ಬಂದಿದೆ. ಹೊಗೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.



Read More: ಅಹಮದಾಬಾದ್ ವಿಮಾನ ದುರಂತ: ವಿಮಾನ ಪಥನಗಳುತ್ತಿರುವ ವಿಡಿಯೋ ವೈರಲ್ Click Here 


ವಿಮಾನದಲ್ಲಿ 242 ಮಂದಿ ಇದ್ದು, ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ವಿಮಾನ ಪತನವಾಗುತ್ತಿದ್ದಂತೆ ವಿಮಾನ ಹೊತ್ತಿ ಉರಿದಿದೆ. ಹೀಗಾಗಿ 242 ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಈ ವಿಮಾನ ಇಂಗ್ಲೆಂಡ್ ಗೆ ಹೊರಟಿತ್ತು ಎನ್ನಲಾಗಿದೆ.

ವಿಮಾನದ ಇಂಜಿನ್ ದೋಷವೇ ದುರಂತಕ್ಕೆ ಕಾರಣವಾ ಎಂಬ ಶಂಕೆ ವ್ಯಕ್ತವಾಗಿದೆ. ದುರಂತಕ್ಕೂ 20 ನಿಮಿಷ ಮುಂಚೆ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ್ದರು. ಅಹಮದಾಬಾದ್ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ 20 ನಿಮಿಷಗಳಲ್ಲೇ ಈ ದುರಂತ ಸಂಭವಿಸಿದೆ. ದುರಂತಕ್ಕೀಡಾದ ವಿಮಾನದಲ್ಲಿ ಗುಜರಾತ್ ನ ಮಾಜಿ ಸಿಎಂ ವಿಜಯ್ ರುಪಾನಿ ಕೂಡ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಾಲಿ ಸಿಎಂಗೆ ಕರೆ ಮಾಡಿ ರುಪಾನಿ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.


Next Post Previous Post
ಜಾಹೀರಾತು

Advertisement

Advertisement

```

Advertisement

Advertisement