ಉಡುಪಿ ನೇಜಾರು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆಯ ನ್ಯಾಯಾಂಗ ಬಂಧನ ವಿಸ್ತರಣೆ.

ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ವಿಚಾರಣೆಯು ಉಡುಪಿಯ ಸತ್ರ ನ್ಯಾಯಾಲಯದಲ್ಲಿ ಅ.24 ರ ಗುರುವಾರದಂದು ನಡೆಯಿತು.

ಕೊಲೆ ಆರೋಪಿ ಪ್ರವೀಣ್ ಚೌಗಲೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಯಿತು. ಮುಂದಿನ ವಿಚಾರಣೆಯ ದಿನಾಂಕದವರೆಗೆ ಆರೋಪಿಯ ನ್ಯಾಯಾಂಗ ಬಂಧನ‌ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.

ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಲಿದ್ದು ಸಾಕ್ಷಿಗಳಿಗೆ ಸಮನ್ಸ್ ನೀಡಲು ಆದೇಶಿಸಿದೆ. ಸಂತ್ರಸ್ಥರ ಪರ ವಿಶೇಷ ಅಭಿಯೋಜಕರಾದ ಶಿವಪ್ರಸಾದ್ ಆಳ್ವ ವಾದ ಮಂಡಿಸಿ ಆರೋಪಿಯ ಗುರುತಿಸುವಿಕೆಯ ಪ್ರಕ್ರಿಯೆಗಾಗಿ ಭೌತಿಕ ಹಾಜರಾತಿ ಅಗತ್ಯವಿದ್ದು, ಆರೋಪಿಯನ್ನು ಮುಂದಿನ ವಿಚಾರಣೆಗೆ ಹಾಜರು ಪಡಿಸುವಂತೆ ಕೋರಿದರು. ನ್ಯಾಯಾಲಯ ಸಮ್ಮತಿ ಸೂಚಿಸಿ ಮಲ್ಪೆ ಠಾಣೆಯ ಇನ್ಸ್ಪೆಕ್ಟರ್ ಅಗತ್ಯ ಭದ್ರತೆಯೊಂದಿಗೆ (ಎಸ್ಕಾರ್ಟ್) ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ನಿರ್ದೇಶಕ ನೀಡಿದೆ.

ಮುಂದಿನ ವಿಚಾರಣೆ ನವೆಂಬರ್ 20 ರಂದು‌ ಮುಂದೂಡಲಾಯಿತು.
Next Post Previous Post

Announcement