ಉತ್ತಮವಾದ ವಿದ್ಯಾವಂತ ಪ್ರೌಢ ಸಮಾಜವೇ ದೇಶದ ಉನ್ನತಿಗೆ ಅಡಿಪಾಯ - ಸ್ಪೀಕರ್ ಯುಟಿ ಖಾದರ್

ಮಂಗಳೂರು: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ವತಿಯಿಂದ ಜ12 ರಂದು ಅಜ್ಮಾನಿನ ವುಡ್ ಲೆಮ್ ಪಾರ್ಕ್ ಸ್ಕೂಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆದ ಸಿಲ್ವರ್ ಜ್ಯುಬಿಲಿ  ಸಮಾರಂಭ ಹಾಗೂ ಫ್ಯಾಮಿಲಿ ಮುಲಾಖಾತ್  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಿಧಾನಸಭಾ ಸಭಾಪತಿ ಯು ಟಿ ಖಾದರ್ ಸನ್ಮಾನವನ್ನು ಸ್ವೀಕರಿಸಿ  ಮಾತನಾಡುತ್ತಾ DKSC ಸಂಸ್ಥೆಯು ಮಾಡುತ್ತಿರುವ ಶೈಕ್ಷಣಿಕ  ಸೇವೆ ಯನ್ನು ಕೊಂಡಾಡಿ ಶ್ಲಾಘಿಸಿದರು. 






ಉತ್ತಮವಾದ ವಿದ್ಯಾವಂತ ಪ್ರೌಢ ಸಮಾಜವೇ ದೇಶದ ಉನ್ನತಿಗೆ ಅಡಿಪಾಯ ಹಾಗಾಗಿ ಪ್ರತಿ ಭಾರತೀಯನು  ತನ್ನ ಮಕ್ಕಳಿಗೆ ಮತ್ತು ತನ್ನ ಸಮಾಜಕ್ಕೆ ಉತ್ತಮ ವಿದ್ಯೆ ಸಿಗುವಂತೆ ಪ್ರಯತ್ನಿಸುವುದು ಅವನ ದೇಶಭಕ್ತಿಯ ಅಂಗ ಎಂದು ಶೈಕ್ಷಣಿಕ ರಂಗದ ಮಹತ್ವವನ್ನು ವಿವರಿಸಿದರು.




 ಸಮಾಜದ ಶೈಕ್ಷಣಿಕ ಸಬಲೀಕರಣದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಾ ಅನಾಥ ನಿರ್ಗತಿಕ ಮಕ್ಕಳ ಸಹಿತ ಸುಮಾರು ಮೂರು ಸಾವಿರಕ್ಕೂ ಅಧಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿರುವ ದಕ್ಷಿಣ ಕರ್ನಾಟಕ ಸುನೀ ಸೆಂಟರ್ ನೇತ್ರತ್ವದಲ್ಲಿ ಅಲ್ ಇಹ್ ಸಾನ್ ಎಜ್ಯುಕೇಶನ್ ಇನ್ಸಿಟ್ಯೂಟ್ ಮೂಳೂರು ವಿದ್ಯಾ ಸಂಸ್ಥೆಯು ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಸೇವೆಯನ್ನು ನೀಡುತ್ತಿದ್ದು ಭೂಪಟದಲ್ಲಿ ಗುರುತಿಸುವಂತಹ ಜನಪ್ರಿಯ ಸಂಸ್ಥೆಯಾಗಿ ಬೆಳಗುತ್ತಿದೆ ಸಂಸ್ಥೆಯ ಗೌರವಾಧ್ಯಕ್ಷ ಸಯ್ಯದ್ ತ್ವಾಹಾ ಬಾಫಕಿ ತಂಙಳ್ ಕುಂಬೋಲ್ ರವರ ದುಆ ದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. 




ಸಂಸ್ಥೆಯ ಅಧ್ಯಕ್ಷ  ಎಂ ಇ ಮೂಳೂರು ಅಧ್ಯಕ್ಷೀಯ ಭಾಷಣದಲ್ಲಿ DKSC ಇದುವರೆಗೆ ಸಾಧಿಸಿ ತೋರಿಸಿದ ವಿವಿಧ ಶೈಕ್ಷಣಿಕ ಸಾಧನೆಗಳು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಮೈಲುಗಲ್ಲುಗಳಿಗೆ ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಸಹಕರಿಸಿದ ಸಮಾಜದ ನಾಯಕರುಗಳು ಉದ್ಯಮಿಗಳು ಇತರ ಹಿತಚಿಂತಕರು ಗಳಿಗೆ ಕೃತಜ್ಞತೆಗಳನ್ನರ್ಪಿಸಿದರು.ಡಿಕೆ ಎಸ್ಸಿಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸುತ್ತಾ ಎಲ್ಲರ ಸಹಕಾರವನ್ನು ಕೋರಿದರು. 




ಸಿಲ್ವರ್ ಜ್ಯುಬಿಲಿ ಛಯರ್ಮ್ಯಾನ್ ಹಾಜಿ ಇಕ್ಬಾಲ್ ಕಣ್ಣಂಗಾರ್ ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಡಿಕೆ ಯಸ್ಸಿ ಯುಎಇ ಯ ಕಳೆದ 25 ವರ್ಷಗಳ ಸಾಮಾಜಿಕ ಸೇವೆಯ ವಿವರವನ್ನು ನೀಡಿದರು ಪ್ರಧಾನ ಕಾರ್ಯದರ್ಶಿ ಯೂಸುಫ್ ಆರ್ಲಪದವು  ತಮ್ಮ ಸ್ವಾಗತ ಭಾಷಣದಲ್ಲಿ ಡಿಕೆ ಯಸ್ವಿಯ ಪರಿಚಯ ನೀಡುತ್ತಾ DKSC  ನಡೆದುಬಂದ ದಾರಿಯ ವಿವರಣೆಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು ಸಂಸ್ಥೆಯ ಗೌರವಾಧ್ಯಕ್ಷ ಸಯ್ಯದ್ ತ್ವಾಹಾ  ಬಾಪಕಿತಂಙಲ್ ಅಧ್ಯಕ್ಷ ಎಂಇ ಮೂಳೂರು ಇವರ ನಾಯಕತ್ವದಲ್ಲಿ ಕಾರ್ಯಕ್ರಮದ ಚೇರ್ಮನ್ ಇಕ್ಬಾಲ್ ಹಾಜಿ ಕಣ್ಣಂಗಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶವಿದೇಶಗಳ ಸಾವಿರಾರು ಹಿತೈಷಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾದರು. 






ಮುಖ್ಯ ಅತಿಥಿಗಳಾಗಿ  ಇಂಟರ್ ಶಿಪ್ ಸರ್ವೀಸಸ್ ಸ್ಥಾಪಕ ನಿರ್ದೇಶಕರಾದ ಅಕ್ರಂ ಶಾ ಶೇಖ್ ಕರಿಯತ್ ಶಮ್ಸ್ ಕನ್ಷಟ್ರಕ್ಷನ್ ಎಂ ಡಿ  ಅಶ್ರಫ್ ಮಾಂತೂರ್  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ ಕ ಜಿಲ್ಲಾಧ್ಯಕ್ಷ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಚಾರಿಟೇಬಲ್ ಟ್ರಸ್ಟ್ ಫೌಂಡರ್ ಡಾ ಅಬ್ದುಲ್ ಶಕೀಲ್ ಅಭಿಮಾನಿ ಕನ್ಸ್ಟ್ರಕ್ಷನ್ ಸ್ಥಾಪಕ ನಿರ್ದೇಶಕ ಉಮರ್ ಹಾಜಿ  ಪ್ರತಿನಿಧಿ ಸಮೀರ್ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹಾಜಿ ಕೆ ಎಚ್ ರಫೀಕ್ ಹಾಜಿ ಅಬ್ದುಲ್ ಅಜೀಜ್ ಮೂಳೂರು ವ್ಯಾಕ್ಸ್ ಕೇರ್ ಮೆಡಿಕಲ್ ಸೆಂಟರ್ ಡೈರೆಕ್ಟರ್ ಬಶೀರ್ ಕಿನ್ನಿಂಗಾರ್   ಬಿ ಎಂ ಜಾಫರ್ ಅನ್ನೋರು ಮ್ಯಾನೇಜಿಂಗ್  ಡೈರೆಕ್ಟರ್ ಇಸ್ಮಾಯಿಲ್ ಮುಂಬೈ ಉದ್ಯಮಿ ಖಾಲಿದ್ ಸಾಬ್ ರಶೀದ್ ಪಾಷಾ ಆರ್ಲಪದವು ಬದ್ರಿಯಾ ಜುಮಾ ಮಸೀದಿ  ಪ್ರಧಾನ ಕಾರ್ಯದರ್ಶಿ ಪಿ ಕೆ ಅಬುಬಕರ್ ಅಬ್ದುಲ್ಲ ಹಾಜಿ ಕುವೆಂಜ  ಪಿ ಎ ಅಬುಬಕರ್ ಮತ್ತಿತರರು ಉಪಸ್ಥಿತರಿದ್ದರು.







ಫ್ಯಾಮಿಲಿ ಮುಲಾಕತ್ ಅಂಗವಾದ ಸ್ಪರ್ಧೆಗಳು, ಆಟೋಟ ಮೇಲಾಟಗಳು, ಹಗ್ಗ ಜಗ್ಗಾಟ, ಮುಖ್ಯವಾಗಿ ಮಹಿಳೆಯರ ಪಾಕ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮತ್ತು ಪುರುಷರು ಪಾಲ್ಗೊಂಡರು ಅಕ್ರಮ್ ಎಂ ಶೇಕ್, ಡಾ. ಅಬ್ದುಲ್ ಶಕೀಲ್, ಇಬ್ರಾಹಿಮ್ ಹಾಜಿ ಕಿನ್ಯ, ಇಕ್ಬಾಲ್ ಹಾಜಿ ಕಣ್ಣಂಗಾ‌ರ್ ಅವರನ್ನು ಸನ್ಮಾನಿಸಲಾಯಿ.


ಯು ಟೂಬ್ ಸ್ಟಾರ್  ಸಿಂಗರ್ ಮಾಸ್ಟರ್ ನಸೀಫ್ ಅವರ ಮದ್ ಹ್ ಮತ್ತು ನಾತ್ ವಿಶೇಷ ಆಕರ್ಷಣೆಯಾಗಿತ್ತು. DKSC ಯ ಸಾಧನೆಯ ವಿವರ ನೀಡುವ ಒಂದು ಆಡಿಯೋ, ವೀಡಿಯೊ ಪ್ರದರ್ಶನ ರೀಲ್ ಅನ್ನು ಪ್ರದರ್ಶಿಸಲಾಯಿತು DKSCಯ ಪದಾಧಿಕಾರಿಗಳಾದ ಇಬ್ರಾಹಿಂ ಹಾಜಿ ಕಿನ್ಯಾ, ನವಾಝ್‌ ಕೋಟೆಕಾರ್‌, ಸಜಿಪ ರಹ್ಮಾನ್‌, ಮುಹಮ್ಮದ್‌ ಸುಲೈಮಾನ್‌, ಸಮದ್‌ ಬಿರಲಿ, ಅಬ್ದುಲ್ಲಾ ಪೆರುವಾಯಿ, ಇಬ್ರಾಹಿಂ ಕಲತೂರ್‌, ರಿಯಾಝ್‌ ಕುಲಾಯಿ,  ಅಬ್ದುಲ್‌ ಲತೀಫ್‌ ತಿಂಗಳಾಡಿ, ಅಕ್ಬರ್‌ ಅಲಿ ಸುರತ್ಕಲ್‌, ಸಮೀರ್‌ ಕೊಲ್ನಾಡ್‌, ವಹಾಬ್‌ ಕಂಚಿಲ್‌ಕುಂಜ  ಶರೀಫ್‌ ಬೊಲ್ಮಾರ್‌, ಅಶ್ರಫ್‌ ಸಟ್ಟಿಕಲ್‌, ಶುಕೂರ್‌ ಮನಿಲ, 
ಬಾಬಾ ಮೂಸಬ್ಬ, ಅಬ್ದುಲ್‌ ಹಮೀದ್‌ ಕಬಾಯಿಲ್‌, ಕಮರುದ್ದಿನ್‌ ಗುರುಪುರ, ಶಬೀರ್‌ ಜೋಕಟ್ಟೆ, ಮುಹಮ್ಮದ್‌ ಅಲಿ ಮೂಡುತೋಟ, ಸಿರಾಜ್‌ ಮೂಳೂರು, ತೌಫೀಕ್‌ ಕುಂದಾಪುರ, ನಝೀರ್‌ ಕುಪ್ಪೆಟ್ಟಿ ಮುಹಮ್ಮದ್‌ ಅಲಿ ಮೂಡುತೋಟ, ರಫೀಕ್‌ ಸಟ್ಟಿಕಲ್‌, ರಿಯಾಝ್‌ ಮೂಡುತೋಡ, ಹಸಬ್‌ ಬಾವ. ಉಮರ್ ಮಾಸ್ಟರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನವಾಝ್ ಕೋಟೆಕಾರ್ ವಂದಿಸಿದರು.
ಶುಚಿ ರುಚಿಯಾದ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು
Next Post Previous Post

Announcement