ಮಂಗಳೂರು ಭಾರತ್ ಮಾಲ್ ನಲ್ಲಿ "ಧರ್ಮ ಚಾವಡಿ "ತುಳು ಚಿತ್ರದ ಟೀಸರ್ ಬಿಡುಗಡೆ.
ಪುತ್ತೂರು: ರಾಕೇಶ್ ಭೋಜರಾಜ್ ಶೆಟ್ಟಿ ಬಿಳಿಯೂರು ನಿರ್ಮಾಣದ, ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಕಥೆ ಬರೆದು,ನಿರ್ದೇಶಿಸಿದ ತುಳು ಚಿತ್ರ "ಧರ್ಮದೈವ"ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡು 2024ರ ಯಶಸ್ವಿ ಚಿತ್ರ ಎನಿಸಿಕೊಂಡು, ಇದೀಗ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ನಟ ಸಹನಿರ್ದೇಶಕ ರವಿ ಸಾಲ್ಯಾನ್(ರವಿಸ್ನೇಹಿತ್) ನಿರ್ಮಾಣದ, ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು, ಕಥೆ ಬರೆದು ನಿರ್ದೇಶಿಸಿರುವ ಬೇರೆಯೇ ಕಥೆ ಹೊಂದಿರುವ ಬಹು ನಿರೀಕ್ಷಿತ ಎರಡನೇ ತುಳು ಚಿತ್ರ "ಧರ್ಮ ಚಾವಡಿ"ತುಳುಚಿತ್ರದ ಟೀಸರ್, ಮಂಗಳೂರು ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ,ಇತ್ತೀಚಿಗೆ ತುಂಬಿದ ಪ್ರೇಕ್ಷಕರಿಂದ ಬಿಡುಗಡೆಗೊಂಡಿತು.
. ಕಾರ್ಯಕ್ರಮವನ್ನು ಖ್ಯಾತ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಪಾಂಡೇಶ್ವರ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿ ಶುಭ ಹಾರೈಸಿದರು. "ಶಿವದೂತ ಗುಳಿಗೆ "ಖ್ಯಾತಿಯ ಖ್ಯಾತ ನಿರ್ದೇಶಕ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ ಬೈಲ್,ಚಿತ್ರದ ಟೀಸರನ್ನು ಬಿಡುಗಡೆಗೊಳಿಸಿ,"ಧರ್ಮ ದೈವ "ತುಳು ಚಿತ್ರ ಕಥೆ ನಟನೆ ತಂತ್ರಜ್ಞಾನ ನಿರ್ದೇಶನದೊಂದಿಗೆ ಅಪಾರ ಜನಮೆಚ್ಚುಗೆ ಪಡೆದಿರುವ ಯಶಸ್ಸಿನೊಂದಿಗೆ, ಯುವ ನಿರ್ದೇಶಕ ಕಥೆಗಾರ ಕುಕ್ಕುವಳ್ಳಿ,ನಿರ್ದೇಶಿಸಿದ, ಚಿತ್ರ ಹೊಸ ಕಥೆ, ಬಹುತೇಕ ಯುವನಟರೇ ನಟಿಸಿರುವ ಕೃಷ್ಣವಾಣಿ ಬ್ಯಾನರ್ ನಡಿ "ಧರ್ಮಚಾವಡಿ" ಬಹು ನಿರೀಕ್ಷೆ ಹೆಚ್ಚಿಸಿದೆ. ಯಶಸ್ವಿಯಾಗಲಿ.. " ಎಂದು ಶುಭಹಾರೈಸಿದರು.
. ಉದ್ಯಮಿಗಳೂ ಮೀರಾ ಚಿತ್ರದ ನಿರ್ಮಾಪಕರು, ಅಸ್ತ್ರಗ್ರೂಪಿನ ಲಂಚುಲಾಲ್, ಸಹಾಕಾರಿರತ್ನ ಉದ್ಯಮಿ ಕಲಾಪೋಷಕ ರಾಧಾಕೃಷ್ಣ ರೈ ಬೂಡಿಯಾರ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ, ಯುವ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಯುವ ನಿರ್ಮಾಪಕ ಪ್ರತೀಕ್ ಪೂಜಾರಿ, ಉದ್ಯಮಿ ಶೈಲೇಂದ್ರ ಎಸ್. ಸುವರ್ಣ ಮಂಗಳೂರು,ಅಕ್ಷಯ ಕಾಲೇಜಿನ ಸಂಸ್ಥಾಪಕರು, ಉದ್ಯಮಿ ಜಯಂತ್ ನಡುಬೈಲು, ನಡುಬೈಲು ಕುಟುಂಬದ ಹಿರಿಯರು ಬಾಲಕೃಷ್ಣ ಸಾಲಿಯಾನ್, ಸುದ್ದಿ ಪ್ರತಿಭಾರಂಗದ ಅಂಕಣಕಾರ ಲೇಖಕ ನಾರಾಯಣ ರೈ ಕುಕ್ಕುವಳ್ಳಿ, ತುಳು ಸಾಹಿತ್ಯ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಅರ್ಥಧಾರಿ, ಖ್ಯಾತ ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಸೇರಿದಂತೆ ಅನೇಕ ಗಣ್ಯರು ಚಿತ್ರಕ್ಕೆ ಶುಭಹಾರೈಸಿದರು.
ಚಿತ್ರದ ನಾಯಕ ನಟ, ಬಿಡುಗಡೆಗೆ ಸಿದ್ಧಗೊಂಡಿರುವ "ಪಿಲಿಪಂಜ"ಚಿತ್ರದ ಸಹ ನಿರ್ಮಾಪಕ ರಮೇಶ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರದ ಸಹ ನಿರ್ಮಾಪಕ ರವಿ ಸ್ನೇಹಿತ್ ಚಿತ್ರದ ವಿಶೇಷತೆ ಹಾಗೂ ಮೂಡಿ ಬರಲು ಕಾರಣವಾದ ವಿಷಯಗಳನ್ನು ಪ್ರಸ್ತಾಪಿಸುತ್ತಾ ಜಲೈ 11,ಶುಕ್ರವಾರ "ಧರ್ಮಚಾವಡಿ" ತುಳು ಚಿತ್ರ,ಕರಾವಳಿ ಜಿಲ್ಲೆ ಕೇರಳ, ಕೊಡಗು, ಕರ್ನಾಟಕಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿ ಎಲ್ಲರ ಪ್ರೋತ್ಸಾಹ ಬೇಕೆಂದರು.
ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು "ನಮ್ಮ ತುಳುನಾಡಿನ ಬಹುತೇಕ ಶೇ. 80ರಷ್ಟು ಕಲಾವಿದರನ್ನು ಯಾವುದೇ ಆಡಿಷನ್ ಮಾಡದೆ ಅವರ ಪ್ರತಿಭೆ ಸಾಧನೆಗಳ ಗಮನಿಸಿ ಪಾತ್ರಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಚಿತ್ರಕಥೆ ಸಂಭಾಷಣೆ ಸಾಹಿತ್ಯವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರ ಸಾಹಿತಿ ರಝಾಕ್ ಪುತ್ತೂರು ರಚಿಸಿರುತ್ತಾರೆ, ಅರುಣ ರೈ ಪುತ್ತೂರು ಅವರ ಕ್ಯಾಮರಾ ವರ್ಕ್ ಚಿತ್ರದ ವಿಶೇಷತೆಗಳಿಗೆ ಕಾರಣವಾಗಿದೆ. ಒಟ್ಟಿನಲ್ಲಿ ನಟನೆ, ತಂತ್ರಜ್ಞಾನ, ಹಿನ್ನೆಲೆ ಸಂಗೀತ, ಕಲರ್ ಗ್ರೇಡಿಂಗ್, ಎಡಿಟಿಂಗ್ ಎಲ್ಲವೂ ಎಲ್ಲರ ಮೆಚ್ಚುಗೆ ಗಳಿಸಲಿದೆ,ಎಂದು ಸಂತೋಷ ವ್ಯಕ್ತ ಪಡಿಸಿ ಮಾತನಾಡಿದರು.ಯುವ ನಟ ಶರತ್ ಆಳ್ವ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.