SSF ಈಶ್ವರಮಂಗಲ ಮೇನಾಲ ಯುನಿಟ್ ವತಿಯಿಂದ ಎಪ್ರಿಲ್ 29 ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು
ಪುತ್ತೂರು: ಎಸ್ ಎಸ್ ಎಫ್ ಈಶ್ವರಮಂಗಲ ಮೇನಾಲ ಯುನಿಟ್ ವತಿಯಿಂದ ಎಪ್ರಿಲ್ 29 ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಮೇನಾಲ ಮಸ್ಜಿದು ಸ್ವಾಹಾಬಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು . ಬಹು ಮುಸ್ತಫ ಸಖಾಫಿ ಬಿ.ಸಿ ನಗರ ದುಆ ನೆರವೇರಿಸಿದರು. ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಶಫೀಕ್ ಸಅದಿ ಈಶ್ವರಮಂಗಲ ಧ್ವಜಾರೋಹಣಗೈದು
ಶುಭ ಹಾರೈಸಿದರು.
ಸವಾದ್ ಯು.ಎಂ ಅಧ್ಯಕ್ಷತೆ ವಹಿಸಿದರು. ಎಂ.ಎ ಮುಹಮ್ಮದ್ ಕುಂಞಿ ಕೆ.ಸಿ.ಎಫ್ ಉದ್ಘಾಟಿಸಿದರು.
ಝಕರಿಯ ಸಖಾಫಿ ಮೇನಾಲ ಸಂಘಟನೆಯು ನಡೆದು ಬಂದ ಹಾದಿಯನ್ನು ಅರ್ಥವತ್ತಾದ ಶೈಲಿಯಲ್ಲಿ ವಿವರಿಸಿ ಸಂದೇಶ ಭಾಷಣಗೈದರು. ಇಂದು ಮನುಕುಲಕ್ಕೆ ಮಾರಕವಾದ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವ ಸಮೂಹವನ್ನು ಧಾರ್ಮಿಕತೆಯ ಮೂಲಕ ಸರಿದಾರಿಗೆ ತರಲು ಹಾಗೂ ದೇಶದ ಹಾಗೂ ಭವಿಷ್ಯಕ್ಕೆ ಮಾರಕವಾದ ಮಾದಕ ವಸ್ತುಗಳಿಗೆ ವಿರುದ್ಧವಾಗಿ ಹೋರಾಡಲು ಕಾರ್ಯಕರರ್ತರಿಂದ ಪ್ರತಿಜ್ಞೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಂ.ಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಕಾರ್ಯಕರ್ತರಾದ ತ್ವಾಹ ಪಿ.ಎಸ್, ಖಾಲಿದ್ ಎಂ.ಎ, ಹಾರಿಸ್ ಪಿ.ಎಸ್, ಅಶ್ರಫ್ ಎ.ಬಿ, ಬಶೀರ್ ಮದಕ, ಅಬ್ದುಲ್ಲ ಮುಸ್ಲಿಯಾರ್, ಝಕರಿಯ್ಯ
ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು. ರಝ್ಝಾಕ್ ಬಿ.ಎಂ ಮೇನಾಲ ಸ್ವಾಗತಿಸಿ ವಂದಿಸಿದರು. ಕೋಶಾಧಿಕಾರಿ ಸಿದ್ದೀಕ್ ಮದಕ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.