ಸದ್ದಿಲ್ಲದೆ ಸೇವೆ ಮಾಡುವ ನಿಷ್ಕಳಂಕ ಸಮಾಜಮುಖಿ ನಾಯಕ ಡಾ| ಯು.ಟಿ.ಇಫ್ತಿಕಾರ್ ಅಲಿ ಫರೀದ್.
ಮಂಗಳೂರು: ಸಮಾಜಸೇವೆ ಎಂಬ ಗುಣ ಮಾನವೀಯತೆಯ ಪ್ರತಿಬಿಂಬ ಎಂದೇ ಪ್ರಚಲಿತದಲ್ಲಿದೆ.ಅದು ಅಷ್ಟೊಂದು ಮಹತ್ವದ ಸೇವೆ.ಈ ಮಹನೀಯ ಸೇವೆಯನ್ನು ತನ್ನ ಬದುಕಾಗಿಸಿಕೊಂಡ ಎಲೆ ಮರೆ ಕಾಯಿಯ ಪ್ರತಿಭೆಯೇ ಯು.ಟಿ. ಇಫ್ತಿಕಾರ್ ಅಲಿ ! ತಾನು ರಾಜ್ಯದ ಸ್ಪೀಕರ್ ರವರ ತಮ್ಮ ಎಂಬ ಯಾವುದೇ ಹಮ್ಮುಬಿಮ್ಮಿಲ್ಲದೆ ಸದ್ದಿಲ್ಲದೆ ಸೇವೆ ಮಾಡುತ್ತಿರುವ ಈ ಯುವಕನನ್ನು ಇಡೀ ಸಮಾಜ ಸ್ವೀಕರಿಸಿದೆ ಎನ್ನುವುದಕ್ಕೆ ಅವರಿಗೆ ಸಮಾಜದಲ್ಲಿ ಜಾತಿ ಮತ ಬೇಧವಿಲ್ಲದೆ ಸಿಗುತ್ತಿರುವ ಸ್ವೀಕಾರರ್ಹತೆಯೇ ಜ್ವಲಂತ ನಿದರ್ಶನ !!!
ಸಮಾಜಸೇವೆ ಎಂದರೆ ತನ್ನೆಡೆಗೆ ಯಾವುದೇ ಲಾಭ ನಿರೀಕ್ಷಿಸದೇ, ಇತರರ ಹಿತಕ್ಕಾಗಿ ಕೆಲಸ ಮಾಡುವ ಕ್ರಿಯೆಯಾಗಿದೆ.
ಇದು ಮಾನವೀಯತೆಯ ಶ್ರೇಷ್ಠ ಮಾದರಿಯಾಗಿದೆ.
ನಮ್ಮ ಸುತ್ತಲಿರುವ ಸಮಾಜದಲ್ಲಿ ಅನೇಕರು ನೆರವಿನ ಅಗತ್ಯವಿರುವವರಾಗಿದ್ದಾರೆ.
ಅಂತಹವರನ್ನು ಗುರುತಿಸಿ ಅವರಿಗೆ ಯಾವ ಸೇವೆ ಅಗತ್ಯವಿದೆಯೋ ಅವುಗಳನ್ನು ತನ್ನಿಂದಾದ ರೀತಿಯಲ್ಲಿ ಮಾಡಿ ಯು.ಟಿ.ಇಫ್ತಿಕಾರ್ ಅಲಿ ಮಾದರಿಯಾಗಿದ್ದಾರೆ.
ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿ ಗಳಿಗೆ ಸಹಾಯ ಮಾಡುವ ಮೂಲಕ ನಾವು ಕೇವಲ ಅವರ ಜೀವನವನ್ನು ಸುಧಾರಿಸುವುದಲ್ಲದೆ, ಸಮಾಜದಲ್ಲಿಯ ಒಗ್ಗಟ್ಟನ್ನು ಹಾಗೂ ಸೌಹಾರ್ದತೆಯನ್ನು ಕಾಪಾಡಬಹುದು ಎಂಬುದಕ್ಕೆ ಡಾ| ಯು.ಟಿ.ಇಫ್ತಿಕಾರ್ ಅಲಿ ಫರೀದ್ ಸಾಕ್ಷಿಯಾಗಿದ್ದಾರೆ.
ಯಾವುದೇ ಪ್ರಚಾರ ಬಯಸದೆ ಅವರು ಮಾಡುವ ಸೇವೆಗಳನ್ನು ವರ್ಣಿಸಲು ಪದಗಳಿಲ್ಲ !
ಸಮಾಜಸೇವೆಯನ್ನು ವಿವಿಧ ರೂಪದಲ್ಲಿ ಮಾಡಬಹುದು – ಅಶಕ್ತರಿಗೆ ಆಹಾರ ಒದಗಿಸುವುದು, ಶಿಕ್ಷಣಕ್ಕಾಗಿ ಸಹಾಯಮಾಡುವುದು, ಪರಿಸರ ಸಂರಕ್ಷಣೆಗೆ ಮುಂದಾಗುವುದು, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು ಮುಂತಾದವು. ಇಂತಹ ಸೇವಾ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನೂ ಗಾಢಗೊಳಿಸುತ್ತವೆ ಹಾಗೂ ನಮ್ಮೊಳಗಿನ ಕರುಣೆಯನ್ನು ಬೆಳೆಸುತ್ತವೆ.
ಕರುಣೆಯ ವಿಷಯದಲ್ಲಿ ಈ ಉತ್ಸಾಹೀ ಸಾಮಾಜಿಕ ಕಳಕಳಿಯ ಮುಖಂಡ ಹಿಂದಿನಿಂದಲೂ ಮುಂಚೂಣಿಯಲ್ಲಿದ್ದಾರೆನ್ನುವುದು ನಾವು ಗಮನಿಸಬೇಕಾದ ಅಂಶ.
ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಜವಾಬ್ದಾರಿ ಹೊಂದಿರುತ್ತಾರೆ. ನಾವು ಸಮಾಜದಿಂದ ಎಲ್ಲವನ್ನೂ ಪಡೆಯುತ್ತೇವೆ.
ಆದ್ದರಿಂದ ಅದರ ಪರಿಗಣನೆ ನಮ್ಮ ಕರ್ತವ್ಯವಾಗಿದೆ. ಯುವಜನತೆ, ವಿಶೇಷವಾಗಿ, ಸಮಾಜಸೇವೆ ಮಾಡುವ ಮೂಲಕ ನೈತಿಕತೆ ಮತ್ತು ಸಮಾಜ ಬದ್ಧತೆಯ ಪಾಠಗಳನ್ನು ಡಾ| ಯು.ಟಿ.ಇಫ್ತಿಕಾರ್ ಅಲಿ ಅವರಂಥಾ ಸಮಾಜಮುಖಿ ಚಿಂತನೆಯ ನಾಯಕರಿಂದ ಕಲಿಯಬಹುದು.
ಸಮಾಜಸೇವೆ ಇತರರ ಬದುಕಿನಲ್ಲಿ ಬೆಳಕು ತರಬಲ್ಲ ಶಕ್ತಿಯಾಗಿದೆ.
ಇದು ಯಾವುದೇ ದೊಡ್ಡ ಕೆಲಸವಲ್ಲ,ಬದಲಾಗಿ ಮನುಷ್ಯರ ಕರ್ತವ್ಯ ಎನ್ನಬಹುದು.
ಸಣ್ಣ ಸಹಾಯವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಪ್ರತಿಯೊಬ್ಬನೂ ತಮ್ಮ ಸಹಜ ಸಾಮರ್ಥ್ಯದಲ್ಲಿ ಸಮಾಜಸೇವೆಗೆ ಮುಂದಾದರೆ, ನಾವು ನ್ಯಾಯಸಮ್ಮತ ಹಾಗೂ ಸದುದ್ದೇಶಪೂರ್ಣ ಸಮಾಜವೊಂದನ್ನು ರೂಪಿಸಬಹುದು ಎಂಬುದನ್ನು ಉಳ್ಳಾಲದ ಜನಪ್ರಿಯ ಶಾಸಕರಾಗಿದ್ದ ಮರ್ಹೂಂ ಹಾಜಿ ಯು.ಟಿ.ಫರೀದ್ ಅವರ ಪುತ್ರ ಯು.ಟಿ.ಇಫ್ತಿಕಾರ್ ಅಲಿ ಫರೀದ್ ತೋರಿಸುಕೊಟ್ಟಿದ್ದಾರೆ.
ನನ್ನ ಆತ್ಮೀಯರಾದ ಡಾ| ಯು.ಟಿ.ಇಫ್ತಿಕಾರ್ ಅಲಿ ಯವರಿಗೆ ಕರುಣಾಮಯನಾದ ಅಲ್ಲಾಹು ದೀರ್ಘಾಯುಷ್ಯ, ಆಯುರಾರೋಗ್ಯ ಮತ್ತು ಉಜ್ವಲ ರಾಜಕೀಯ ಭವಿಷ್ಯವನ್ನು ಕೊಡಲಿ ಎಂದು ಮನದುಂಬಿ ಪ್ರಾರ್ಥಿಸುತ್ತಿದ್ದೇನೆ.
ಹೆಚ್.ಇಸ್ಮಾಯಿಲ್ ಕಾಫಿ ಬಬ್ಬುಕಟ್ಟೆ
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು, ಸ್ಥಾಪಕಾಧ್ಯಕ್ಷರು ಬಂಧುತ್ವ ಚಾರಿಟೇಬಲ್ ಟ್ರಸ್ಟ್