2024 -2025 ನೇ ಸಾಲಿನ NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ ಶಿಪ್ಪಿಗೆ ಅರ್ಹತೆ ಪಡೆದ ಪಾಣಾಜೆ ಸುಬೋಧ ಪ್ರೌಢಶಾಲೆಯ ವಿದ್ಯಾರ್ಥಿ ಎಂ ಕಲಂದರ್ ಶಿಝನ್
ಪಾಣಾಜೆ : ಪಾಣಾಜೆ ಸುಬೋಧ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿ ಕಲಂದರ್ ಶಿಝನ್ 2024-2025 ನೇ ಸಾಲಿನ ಎನ್ ಎಮ್ ಎಮ್ ಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರುತ್ತಾನೆ.ಶಿಝನ್ ಅರ್ಲಪದವು ಕೆದುವಾರಿನ ಶಂಸುದ್ದೀನ್ ಎಂ ಕೆ ಹಾಗೂ ಸಜೀನಾ ದಂಪತಿ ಪುತ್ರ.
ವಿದ್ಯಾರ್ಥಿಗೆ ಶಾಲೆಯ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿರುತ್ತಾರೆ.