ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಕೇಸ್, ಇಬ್ಬರ ಬಂಧನ! ಹಿಂದೂ ಯುವಕರೇ ಕೊಟ್ರಾ ಸಾಥ್?


ಮಂಗಳೂರು : ಮಂಗಳೂರಿನಲ್ಲಿ ಭೀಕರವಾಗಿ ಹತ್ಯೆಗೆ ಒಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಅಚ್ಚರಿ ವಿಚಾರವೊಂದು ಹೊರ ಬಿದ್ದಿದ್ದು ಈ ಆರೋಪಿಗಳಿಗೆ ಬಜರಂಗದಳದ ಮಾಜಿ ಕಾರ್ಯಕರ್ತನೊಬ್ಬ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಹೌದು, ಸುಹಾಸ್ ಶೆಟ್ಟಿ ಕೊಲೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಎಂಟು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರದಲ್ಲಿ ಪ್ರಮುಖ ಆರೋಪಿಗಳು ಮುಸ್ಲಿಂ ಧರ್ಮೀಯರೆನ್ನಲಾಗಿದ್ದು ಇವರಿಗೆ ಬಜರಂಗದಳದ ಮಾಜಿ ಕಾರ್ಯಕರ್ತನೊಬ್ಬ ಸಹಾಯ ಮಾಡಿದ್ದ ಎನ್ನಲಾಗಿದ್ದು ಆತನನ್ನೂ ಬಂಧಿಸಲಾಗಿದೆ.
Next Post Previous Post

Announcement