BREAKING NEWS: Israel-Iran War: ಭಾರತದಲ್ಲಿ ಚಿನ್ನ - ಬೆಳ್ಳಿ & ಪೆಟ್ರೋಲ್ - ಡೀಸೆಲ್ ಬೆಲೆ ದಿಢೀರ್ ಏರಿಕೆ.... ಸಾಧ್ಯತೆ!
ಇಸ್ರೇಲ್ ಇರಾನ್ ಯುದ್ಧ: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಜೋರಾಗುತ್ತಿದೆ. ಅಮೆರಿಕ ಎಂಟ್ರಿ ಬಳಿಕ ಮತ್ತಷ್ಟು ಸಿಡೆದಿದ್ದಿರುವ ಇರಾನ್, ಇಸ್ರೇಲ್ ಮೇಲೆ ತಿರುಗಿ ಬಿದ್ದಿದೆ. ಇತ್ತ ಅಮೆರಿಕವು ತನ್ನ ಮೂರು ಪರಮಾಣು ಘಟಕಗಳ ಮೇಲೆ ಬಾಂಬ್ ದಾಳಿ ಮಾಡಿದ ನಂತರ, ಇರಾನ್ ಸಂಸತ್ತು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇರಾನ್ನ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ಮುದ್ ಜಲಸಂಧಿಯೇನಾದರೂ ಮುಚ್ಚಿದರೆ ವಿಶ್ವದ ಶೇಕಡಾ 25ರಷ್ಟು ತೈಲ ಪ್ರತಿದಿನ ಹಾದುಹೋಗುವ ಮಾರ್ಗವೇ ಬಂದ್ ಆಗಲಿದೆ. ಇದರ ಪರಿಣಾಮ ಭಾರತಕ್ಕೂ (India) ತಟ್ಟಲಿದ್ದು, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ (Petrol Diesel Price Hike) ದುಬಾರಿಯಾಗುತ್ತಾ ಎಂಬ ಆತಂಕ ಶುರುವಾಗಿದೆ.
ಬದಲಾದ ಬೆಳವಣಿಗೆಯಲ್ಲಿ ಭಾರತದಲ್ಲಿ ಏಕಾಏಕಿ ಚಿನ್ನ, ಬೆಳ್ಳಿ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇಸ್ರೇಲ್ ಹಾಗೂ ಇರಾನ್ನ ನಡುವೆ ಯುದ್ಧ ತೀವ್ರವಾಗುತ್ತಿದ್ದು. ಇದೀಗ ಈ ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಹಾಗೂ ರಷ್ಯಾದಂತಹ ದೈತ್ಯ ರಾಷ್ಟ್ರಗಳ ಎಂಟ್ರಿಯಾಗಿದೆ. ಹೀಗಾಗಿ ಮೂರನೇ ಯುದ್ಧವಾಗುವ ಎಲ್ಲಾ ಅಪಾಯಗಳೂ ಇವೆ. ಹೀಗಾಗಿ, ವಿಶ್ವದಾದ್ಯಂತ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಲಿದೆ.
ಈಗಾಗಲೇ ಬ್ಯಾರೆಲ್ ಕಚ್ಚಾ ತೈಲದ ಬೆಲೆಯು ಸಾಕಷ್ಟು ಹೆಚ್ಚಿಗೆ ಆಗಿದೆ. ಇಸ್ರೇಲ್ ಮತ್ತು ಇರಾನ್ ಯುದ್ಧ ಪ್ರಾರಂಭವಾದಾಗಲೇ ವಿಶ್ವದಾದ್ಯಂತ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಇದರೊಂದಿಗೆ ಚಿನ್ನದ ಬೆಲೆಯೂ ಹೂಡಿಕೆದಾರರಿಂದ ಹೆಚ್ಚಾಗುತ್ತಿದೆ.