SSF ರೆಂಜ ಸೆಕ್ಟರ್ ಸಾಹಿತ್ಯೋತ್ಸವ -2024 ಚಾಂಪಿಯನ್ ಪ್ರಶಸ್ತಿಯನ್ನು : ಪಾಣಾಜೆ ಹಾಗೂ ರನ್ನರ್ ಅಪ್ ಆಗಿ : ರೆಂಜ ಯೂನಿಟ್ ಹೊರಹೊಮ್ಮಿತು

ಪುತ್ತೂರು: SSF ರೆಂಜ ಸೆಕ್ಟರ್ ಸಾಹಿತ್ಯೋತ್ಸವ - 2024 ಫಾರೂಕ್ ಜುಮಾ ಮಸೀದಿ ರೆಂಜ ವಠಾರದಲ್ಲಿ ಅಕ್ಟೋಬರ್ 20 ರಂದು ನಡೆಯಿತು.



ಈ ಕಾರ್ಯಕ್ರಮದಲ್ಲಿ 5 ಶಾಖೆಗಳಾದ ಪಾಣಾಜೆ, ಡೆಮ್ಮಂಗರ, ರೆಂಜ, ತಂಬುತ್ತಡ್ಕ ಹಾಗೂ ಪೇರಳ್ತಡ್ಕ ಯುನಿಟುಗಳ ನಡುವೆ ತೀವ್ರ ಪೈಪೋಟಿಯೊಂದಿಗೆ ಸ್ಪರ್ಧಿಸಿ ಚಾಂಪಿಯನ್ ಪಟ್ಟವನ್ನು ಪಾಣಾಜೆ ಯೂನಿಟ್ ಹಾಗೂ ರನ್ನರ್ ಅಪ್ ಆಗಿ ರೆಂಜ ಯೂನಿಟ್ ಪಡೆದರು. ಮತ್ತು ಕಾರ್ಯಕ್ರಮದ. PEN OF THE FEST ಪ್ರಶಸ್ತಿಯನ್ನು ಪಾಣಾಜೆ ಯೂನಿಟ್ ನ ಸಿಂಸಾರುಲ್ ಹಕ್ ಆರ್ಲಪದವು ಹಾಗೂ STAR OF THE FEST ಪ್ರಶಸ್ತಿಯನ್ನು ರೆಂಜ ಯೂನಿಟ್ ನ ಆದಿಲ್ ಶಾ ಪಡೆದುಕೊಂಡರು.




ಒಟ್ಟು ಐದು ವಿಭಾಗಗಳಲ್ಲಿ 128 ಸ್ಪರ್ಧೆಗಳಿದ್ದವು ಮತ್ತು ಇದರಲ್ಲಿ 150ಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳು  ಭಾಗವಹಿಸಿದ್ದರು. ಮತ್ತು ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು  ಪಾತ್ರಕೋಡಿಯಲ್ಲಿ ನಡೆಯುವ ಡಿವಿಜನ್ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಮತ್ತು ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ಅತಿಥಿ ಹಾಗೂ ಉಮಾರ ನಾಯಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Post Previous Post

Announcement