ಡಾ. ಹಾಜಿ. ಎಸ್ ಅಬೂಬಕ್ಕರ್ ಆರ್ಲಪದವು ಇವರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ (ರಿ) ಇವರು ನಾಡಿಗಾಗಿ ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ  ಸಾಧಕ ಗಣ್ಯರಿಗೆ ನೀಡಲ್ಪಡುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಬಹುಮುಖ ಪ್ರತಿಭೆಗಳ ಗಡಿನಾಡಿನ ಸಾಧಕರ ಸೇವೆಯಲ್ಲಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರನ್ನು ಆಯ್ಕೆ ಮಾಡಲಾಗಿದೆ. 


 ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಘಟನೆ ಜಾನಪದ ಸಂಸ್ಕೃತಿ ಸಮಾಜ ಸೇವೆ ಹೀಗೆ ವಿವಿಧ ಆಯಾಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಇವರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸುಮಾರು 160ಕ್ಕಿಂತಲೂ ಮಿಕ್ಕಿದ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾದವರಾಗಿರುತ್ತಾರೆ.


ಇವರಿಗೆ ಮೈಸೂರಿನ ಸಾಹಸ ಸಿಂಹ ಸಭಾಂಗಣ ದಲ್ಲಿ ಏಪ್ರಿಲ್ 20ರಂದು  ನಡೆಯಲಿರುವ ಮಹಾಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ವಿಧುಷಿ ಶ್ರೀಮತಿ ಪ್ರೇಮಾಂಜಲಿ ಆಚಾರ್ಯ ಮತ್ತು ಗೌರವಾಧ್ಯಕ್ಷರಾದ ಸಹನಿರ್ದೇಶಕ ಸಾಹಿತಿ ಡಾ.ಕೆಂಚನೂರು ಶಂಕರ ಇವರುಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
Next Post Previous Post

Announcement