ಇಶಾನಿ ರೈ ಗೊಲಿದ ಈಜು ವೈಯಕ್ತಿಕ ಜಿಲ್ಲಾ ಚಾಂಪಿಯನ್ ಶಿಪ್ ಗೌರವ
ಪುತ್ತೂರು: ಯೋಗ,ಕರಾಟೆ, ಕಬಡ್ಡಿ ಮತ್ತಿತರ ಕ್ರೀಡೆಗಳಂತೆ ಶಾರೀರಿಕ ಮಾನಸಿಕ ಸಂವರ್ಧನೆಯ ಕ್ರೀಡೆಯಾಗಿದ್ದು ಇದರಲ್ಲೂ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿ ಪದಕ ವಿಜೇತರಾಗಿ ಊರ ಕೀರ್ತಿ ಬೆಳಗುವರು.
ಇತ್ತೀಚೆಗೆ,ಮಂಗಳೂರು ದಕ್ಷಿಣ ವಿಭಾಗ ಇನ್ನರ್ ವೀಲ್ ಕ್ಲಬ್ ಮತ್ತು ಮಂಗಳ ಸ್ವಿಮ್ಮಿಂಗ್ ಕ್ಲಬ್ ಸಹಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದ ಪ್ರಥಮ ನೋನ್ ಮೆಡಲಿಸ್ಟ್ ಈಜು ಸ್ಪರ್ಧೆ:2025ರಲ್ಲಿ,ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ಕು.ಇಶಾನಿ ಆರ್.ರೈ 50ಮೀ.ಬ್ರೆಸ್ಟ್ ಸ್ಟ್ರೋಕ್,50ಮೀ.ಫ್ರೀಸ್ಟೈಲ್ ಹಾಗೂ 50ಮೀ.ಬ್ಯಾಕ್ ಸ್ಟ್ರೋಕ್ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳೊಂದಿಗೆ,ಚಿನ್ನದ ಪದಕ ಪ್ರಶಸ್ತಿ ಪತ್ರಗಳೊಂದಿಗೆ,4×50ಮೀ.ಮಿಕ್ಸ್ಡ್ ಫ್ರೀಸ್ಟೈಲ್ ರಿಲೇ ಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದ ಸಾಧನೆ ಮಾಡಿರುತ್ತಾಳೆ.
ಪುತ್ತೂರು ಅಕ್ವಾಟಿಕ್ ಕ್ಲಬ್ ನ ಸದಸ್ಯೆಯಾಗಿರುವ ಕು.ಇಶಾನಿ ರೈ,ಕುರಿಯ ಸಂಪ್ಯದ ಮೂಲೆಯ ನಿವಾಸಿ, ನೆಲ್ಯಾಡಿ ಉದನೆ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ ಮತ್ತು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಆಶಾಲತಾ ರಾಜೇಶ್ ಕೆ.ಅವರ ಪುತ್ರಿ.ಕಲಿಕೆಯಲ್ಲೂ ಮುಂದಿರುವ ಕು.ಇಶಾನಿ ರೈ ರಾಜ್ಯ ರಾಷ್ಟ್ರ ಮಟ್ಟಗಳ ಸಾಧನೆ ಮಾಡಲೆಂದು ಹಾರೈಸೋಣ.
✍️ ನಾರಾಯಣ ರೈ ಕುಕ್ಕುವಳ್ಳಿ.