BREAKING : ಮೊದಲ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ನೀರಜ್ ಚೋಪ್ರಾ | Paris Diamond League


ಪ್ಯಾರಿಸ್ : ಭಾರತದ ಚಿನ್ನದ ಹುಡುಗ ಖ್ಯಾತ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.

ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆಂಡರ್ಸನ್ ಪೀಟರ್ಸ್ ಮತ್ತು ಜೂಲಿಯನ್ ವೆಬರ್ ಅವರನ್ನು ಸೋಲಿಸಿ ಎರಡು ವರ್ಷಗಳಲ್ಲಿ ತಮ್ಮ ಮೊದಲ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.


ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆಯುವ ಮೂಲಕ ಉತ್ತಮ ಸಾಧನೆ ತೋರಿದರು. ಖ್ಯಾತ ಆಟಗಾರ ವೆಬರ್ 87.88 ಮೀಟರ್ ದೂರ ಎಸೆದು 2ನೇ ಸ್ಥಾನ ಪಡೆದರೆ, ಬ್ರೆಜಿಲ್ನ ಲೂಯಿಜ್ ಮಾರಿಸಿಯೊ ಡಾ ಸಿಲ್ವಾ 86.62 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದರು.

ಡೈಮಂಡ್ ಲೀಗ್ ನ ದೋಹಾ ಲೆಗ್ ನಲ್ಲಿ ನೀರಜ್ ಚೋಪ್ರಾ ಅವರನ್ನು ಸೋಲಿಸಿದ್ದ ಜೂಲಿಯನ್ ವೆಬರ್ ಪ್ಯಾರಿಸ್ ನಲ್ಲಿ ವಿಫಲರಾಗಿದ್ದು, ನೀರಜ್ ಚೋಪ್ರಾ ಅಪ್ರತಿಮ ಸಾಧನೆಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
Next Post Previous Post
ಜಾಹೀರಾತು

Advertisement

Advertisement

```

Advertisement

Advertisement