ಸುನ್ನಿ ಕೋ ಆರ್ಡಿನೇಷನ್ ಸಮಿತಿ ಪಾಣಾಜೆ ಇದರ ನೇತೃತ್ವದಲ್ಲಿ ನಡೆಯುವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಸುನ್ನೀ ಕೋ ಅರ್ಡಿನೇಷನ್ ಸಮಿತಿ ಪಾಣಾಜೆ ಇದರ ನೇತೃತ್ವದಲ್ಲಿ ಕೆಎಂಜೆ ಎಸ್ ವೈ ಎಸ್ ಎಸ್ ಎಸ್ ಎಫ್ ಆಶ್ರಯದಲ್ಲಿ ಜುಲೈ 5ರಂದು ಪಾಣಾಜೆ ಪಳ್ಳಿತ್ತಡ್ಕ ದರ್ಗಾ ವಠಾರದಲ್ಲಿ ಮರ್ಹೂಂ ಪಾರ್ಪಳ ಹಸೈನಾರ್ ಹಾಜಿ ವೇದಿಕೆಯಲ್ಲಿ ನಡೆಯಲಿರುವ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಏರ್ವಾಡಿ ಮಜ್ಲೀಸ್ ಹಾಗೂ ಅಭಿನಂದನಾ ಸಮಾರಂಭ ಮತ್ತು ಮರ್ಹೂಂ ಇಬ್ರಾಹಿಂ ಊಢ್ಢಂಗಳ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆಯು ಜೂನ್ 30ರಂದು ಆರ್ಲಪದವು ಜೆ ಎಸ್ ಶಿಯಾಬುದ್ದೀನ್ ಮನೆಯಲ್ಲಿ ಜರುಗಿತು .
ಸಮಾರಂಭದ ಅಧ್ಯಕ್ಷತೆಯನ್ನು ಸುನ್ನೀ ಕೋ ಅರ್ಡಿನೇಷನ್ ಸಮಿತಿ ಪಾಣಾಜೆ ಇದರ ಛಯರ್ಮ್ಯಾನ್ ಡಾ.ಹಾಜಿ. ಎಸ್ ಅಬೂಬಕರ್ ಆರ್ಲಪದವು ವಹಿಸಿದರು ಕೆ ಎಂ ಜೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಕಡಮಾಜೆ ಸ್ವಾಗತಿಸಿ ಸುನ್ನಿ ಕೋ ಆರ್ಡಿನೇಷನ್ ಸಮಿತಿ ಪಾಣಾಜೆ ಪ್ರಧಾನ ಕನ್ವೀನರ್ ಜೆ ಎಸ್ ಶಿಯಾಬುದ್ದೀನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಪಾಣಾಜೆ ಯೂನಿಟ್ ಅಧ್ಯಕ್ಷ ಶಂಸುದ್ದೀನ್ ಎಂ ಕೆ ಎಸ್ ಎಸ್ ಎಫ್ ಪಾಣಾಜೆ ಯೂನಿಟ್ ಅಧ್ಯಕ್ಷ ಸಿಂಸಾರುಲ್ ಹಕ್, ಸುನ್ನಿ ಕೋ ಆರ್ಡಿನೇಷನ್ ಸಮಿತಿ ಪಾಣಾಜೆ ಇದರ ವೈಸ್ ಚೇರ್ಮ್ಯಾನ್ ಗಳಾದ ಎ ಎಸ್ ಆರ್ ಮುಹಮ್ಮದ್ ಕುಂಞ, ಜೆ ಎಸ್ ಮನ್ಸೂರ್ , ಉಪಾಧ್ಯಕ್ಷರಾದ ಮೂಸ ಆರ್ಲಪದವು ಉಪಕನ್ವೀನರ್ ಸಲೀಂ ತೋಡುಬಳಿ, ಸಂಘಟನಾ ಕಾರ್ಯದರ್ಶಿಗಳಾದ ಖಾಲಿದ್ ಪಾರ್ಪಳ, ತಾಜರ್ಖಾನ್ ಕೀಲಂಪಾಡಿ , ಖಾಲಿದ್ ಅಜ್ವ ಬೇಕರಿ, ಇಸ್ಮಾಯಿಲ್ ಜೆ ಎಸ್, ಎಸ್ ಎಸ್ ಎಫ್ ಸದಸ್ಯರಾದ ಮುಸ್ತಫಾ ಪಳ್ಳಿತ್ತಡ್ಕ, ಶೆರೀಫ್ ಪಳ್ಳಿತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.