RCB ವೇಗಿ ಜೋಶ್ ಹ್ಯಾಜಲ್‌ವುಡ್ ಅಬ್ಬರ: ಆಸೀಸ್‌ಗೆ ಭರ್ಜರಿ ಜಯ
ವೆಸ್ಟ್ ಇಂಡೀಸ್ ಅಂದುಕೊಂಡ ಜಯವನ್ನು ಸಾಧಿಸುವಲ್ಲಿ ವಿಫಲವಾಯಿತು. ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ.
ಶುಕ್ರವಾರ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 4 ವಿಕೆಟ್‌ಗೆ 92 ರನ್‌ಗಳಿಂದ ಆಟ ಮುಂದುವರಿಸಿ 310 ರನ್ ಸೇರಿಸಿತು. ಈ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರದ ಟ್ರಾವಿಸ್ ಹೆಡ್ ಹಾಗೂ ಬ್ಯೂ ವೆಬ್ ಸ್ಟಾರ್ ಜೋಡಿ ತಂಡಕ್ಕೆ ಉತ್ತಮ ಜತೆಯಾಟದ ಕಾಣಿಕೆ ನೀಡಿತು. ಈ ವೇಳೆ 8 ಬೌಂಡರಿ ನೆರವಿನಿಂದ 61 ರನ್ ಬಾರಿಸಿದ್ದ ಟ್ರಾವಿಸ್ ಹೆಡ್ ಔಟ್ ಆದರು.
ಟ್ರಾವಿಸ್ ಹೆಡ್ ಔಟ್ ಆಗುತ್ತಿದ್ದಂತೆ ಬ್ಯೂ ವೆಬ್ ಸ್ಟಾರ್ ಸಹ ಇಲ್ಲದ ಹೊಡೆತಕ್ಕೆ ಮುಂದಾಗಿ 63 ರನ್‌ಗಳಿಗೆ ಔಟ್ ಆದರು. ಆಸ್ಟ್ರೇಲಿಯಾ ತಂಡದ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ತಮ್ಮ ನೈಜ ಆಟವನ್ನು ಆಡಿ ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಇವರು 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 65 ರನ್ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ವಿಂಡೀಸ್ ತಂಡದ ಪರ ಶಮರ್ ಜೋಸೆಫ್ ಐದು ವಿಕೆಟ್ ಪಡೆದರು.
ರನ್ ಕಲೆ ಹಾಕಲು ಪರದಾಟ
300 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಅಲ್ಲದೆ ಟಾಪ್ ಆರ್ಡರ್ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಜಸ್ಟಿನ್ ಗ್ರೀವ್ಸ್ 38, ಕೆಳ ಕ್ರಮಾಂಕದಲ್ಲಿ ಶಮರ್ ಜೋಸೆಫ್ 44 ರನ್ ಬಾರಿಸಿ ಔಟ್ ಆದರು. ವಿಂಡೀಸ್ ತಂಡದ ಪರ ಜೊತೆಯಾಟಗಳು ಬಾರದೆ ಇದಿದ್ದರಿಂದ ತಂಡ ಸೋಲನ್ನು ಕಾಣುವಂತೆ ಆಯಿತು. ಪರಿಣಾಮ ಪ್ರವಾಸಿ ಆಸ್ಟ್ರೇಲಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ತಂಡದ ಪರ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ 12 ಓವರ್ ಬೌಲ್ ಮಾಡಿ 43 ರನ್ ನೀಡಿ 5 ವಿಕೆಟ್f ಕಬಳಿಸಿದರು. ಸ್ಪಿನ್ ಬೌಲರ್ ನಾಥನ್ ಲಿಯಾನ್ 20 ರನ್ ನೀಡಿ 2 ವಿಕೆಟ್ ಪಡೆದರು. ಉಭಯ ದೇಶಗಳ ನಡುವಣ ಮೂರನೇ ಪಂದ್ಯ ಜುಲೈ 3ರಂದು ನಡೆಯಲಿದೆ.